
27th April 2025
ಯಾದಗಿರಿ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ 26 ಜನರ ನರಮೇದ ಖಂಡಿಸಿ ಎಐಸಿಸಿ ಸೂಚನೆ ಮೆರೆಗೆ ನಗರದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಮೇಣದ ಬತ್ತಿ ಹಚ್ಚುವ ಮೂಲಕ ಮೌನಾಚರಣೆ ನಡೆಸಲಾಯಿತು. ಇಲ್ಲಿನ ಗಾಂಧಿ ಚೌಕ್ ನಲ್ಲಿ ಜಿಲ್ಲಾಧ್ಯಕ್ಷ ಬಸರಡ್ಡಿ ಅನಪುರ, ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸೇರಿ ಮೇಣದ ಬತ್ತಿ ಹಚ್ಚಿ ಮೃತರ ಆತ್ಮಕ್ಕೆ ಶಾಂತಿ ಕೊರಿದರು.
ಈ ವೇಳೆ ಮಾತನಾಡಿದ ಶಾಸಕ ಪಾಟೀಲ್, ಪಹಲ್ಗಾಮ್ ನಲ್ಲಿ ಉಗ್ರರು 26 ಜನರನ್ನು ಕೊಂದಿದ್ದು, ಅಕ್ಷ್ಯಮ್ ಅಪರಾಧ. ಇಂತಹವರನ್ನು ಸುಮ್ಮನ್ನೆ ಬೀಡಬಾರದು, ಈಗಾಗಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯದಲ್ಲಿ ಸರ್ಕಾರದ ಜೊತೆ ಇರುವುದಾಗಿ ಹೇಳಿಕೆ ನೀಡುವ ಮೂಲಕ ನಾವೆಲ್ಲ ಭಾರತೀಯರು ಒಂದೇ ಎಂಬ ಸಂದೇಶ ಸಾರಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಬಸರಡ್ಡಿ ಅನಪುರ ಮಾತನಾಡಿದರು. ಈ ವೇಳೆ ಚಿದಾನದಪ್ಪ ಕಾಳಬೆಳಗುಂದಿ,ವಿನಾಯಕ ಮಾಲಿ ಪಾಟೀಲ,ಬಿಮಣ್ಣ ಮೇಟಿ, ರಾಜಾಮುಲನದ್ದೀನ್ ಜಮಾದಾರ್ , ಅಬ್ದುಲ್ ರೆಹಮಾನ್ ಕಿಲ್ಲನಕೇರ, ಲಕ್ಷ್ಮಣ ರಾಠೋಡ್, ಮರಿಯಪ್ಪ ಬಿಳಹಾರ್, ಬಸ್ಸು ಗೌಡ ಬಿಳಹಾರ್, ಮಲ್ಲಿಕಾರ್ಜುನ ಈಟೆ,ಮಂಜುಳಾ ಗೂಳಿ,ರಾಘವೇಂದ್ರ ಮಾನಸಗಲ್,ಚನ್ನಕೇಶವ ಬಾಣತಿಹಾಳ, ಶಹಬಜ್ ಜಾಗಿದಾರ್, ಹನುಮಂತ ನಾಯಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮ ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಮಲೇರಿಯಾದಿಂದ ಮುಕ್ತರಾಗಿ